Home ಕೋಲಾರ 6 ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯ: ಆರೋಪಿಗಳು ಯಾರೇ ಆಗಿರಲಿ, ಕಠಿಣ ಶಿಕ್ಷೆಯಾಗಬೇಕು.-ಅಪ್ಸರ್ ಕೊಡ್ಲಿಪೇಟೆ SDPI
ಕೋಲಾರರಾಜ್ಯ

6 ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯ: ಆರೋಪಿಗಳು ಯಾರೇ ಆಗಿರಲಿ, ಕಠಿಣ ಶಿಕ್ಷೆಯಾಗಬೇಕು.-ಅಪ್ಸರ್ ಕೊಡ್ಲಿಪೇಟೆ SDPI

URL copied
Share URL copied

ಕೋಲಾರ : ಬಂಗಾರಪೇಟೆ ಭೋವಿ ನಗರದಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದಿರುವ ಅತ್ಯಂತ ಅಮಾನವೀಯ ಲೈಂಗಿಕ ದೌರ್ಜನ್ಯದ ಆರೋಪಗಳು ಇಡೀ ಸಮಾಜವನ್ನು ಬೆಚ್ಚಿಬೀಳಿಸುವಂತಿವೆ. ಪುಟ್ಟ ಮಗುವಿನ ಮೇಲೆ ಇಂತಹ ಕ್ರೌರ್ಯ ಎಸಗಿರುವ ಆರೋಪಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಸರ್ಕಾರವನ್ನು ಆಗ್ರಹ ಮಾಡಿದ್ದಾರೆ.

ಮಗುವಿನ ಕುಟುಂಬ ಅತ್ಯಂತ ಬಡ ಮತ್ತು ದುರ್ಬಲ ಹಿನ್ನೆಲೆಯ ಕುಟುಂಬವಾಗಿರುವುದರಿಂದ, ಅವರಿಗೆ ನ್ಯಾಯ ದೊರಕಿಸುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮೇಲಿದೆ. ಬಡವರು, ದುರ್ಬಲರು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಯಾರಿಗೂ ನ್ಯಾಯದಲ್ಲಿ ಅನ್ಯಾಯವಾಗಬಾರದು.

ಪ್ರಾರಂಭದಲ್ಲಿ ಸ್ಥಳೀಯ ಪ್ರಭಾವಿ ಮುಖಂಡರು ಸೇರಿಕೊಂಡು ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ವೇಳೆ ಎಸ್‌ಡಿಪಿಐ ಕೋಲಾರ ಜಿಲ್ಲಾಧ್ಯಕ್ಷರಾದ ಶಾಹುಝ್ಝಮ ರವರ ನೇತೃತ್ವದ ನಿಯೋಗವೂ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿ ಸ್ಥಳೀಯ ಶಾಸಕರು ಹಾಗೂ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣವನ್ನು ಮುಚ್ಚಿ ಹಾಕದಂತೆ ನಿಗಾವಹಿಸಿ ಎಫ್ಐಆರ್ ದಾಖಲಾಗುವಂತೆ ನೋಡಿಕೊಂಡಿದೆ.

ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಪೊಲೀಸ್ ಅಧಿಕಾರಿಗಳೂ ಘಟನೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ, ಸಾರ್ವಜನಿಕವಾಗಿ ಈ ಪೈಶಾಶಿಕ ಕೃತ್ಯದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ, ಪ್ರಭಾವಿ ವ್ಯಕ್ತಿಗಳ ಒತ್ತಡವಿದೆ ಎಂಬ ಆರೋಪಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ತನಿಖೆ ಸ್ಪಷ್ಟಪಡಿಸಬೇಕು. ಯಾರೇ ಆರೋಪಿಯಾಗಿರಲಿ, ಎಷ್ಟೇ ಪ್ರಭಾವಿಯಾಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು.

ಪೊಲೀಸ್ ಇಲಾಖೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು, ಬಾಲಕಿಯ ಮೇಲೆ ನಡೆದಿರುವ ದೌರ್ಜನ್ಯದ ಸಂಪೂರ್ಣ ತನಿಖೆ ನಡೆಸಬೇಕು, ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಆರೋಪಿಯನ್ನೂ ಗುರುತಿಸಿ ಬಂಧಿಸಬೇಕು, ಎಫ್ಐಆರ್ನಲ್ಲಿ ಯಾವುದೇ ಅಂಶ ಕೈಬಿಡಲಾಗಿದೆಯೇ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು.

ವೈದ್ಯಕೀಯ ಹಾಗೂ ಫಾರೆನ್ಸಿಕ್ ಸಾಕ್ಷ್ಯಗಳನ್ನು ಯಾವುದೇ ಒತ್ತಡವಿಲ್ಲದೆ ಸಂರಕ್ಷಿಸಿ ತನಿಖೆಗೆ ಬಳಸಬೇಕು, ಆರೋಪಿಗಳಿಗೆ ರಾಜಕೀಯ ಅಥವಾ ಸಾಮಾಜಿಕ ಪ್ರಭಾವದ ಆಧಾರದ ಮೇಲೆ ಯಾವುದೇ ರಕ್ಷಣೆ ನೀಡಬಾರದು, ತನಿಖೆಯಲ್ಲಿ ಪೊಲೀಸ್ ಅಥವಾ ವೈದ್ಯಕೀಯ ಅಧಿಕಾರಿಗಳಿಂದ ಯಾವುದೇ ಲೋಪವಾಗಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಹಾಗೂ ಅಗತ್ಯ ವೈದ್ಯಕೀಯ ಮತ್ತು ಕಾನೂನು ನೆರವು ನೀಡಬೇಕು, ಫೋಸ್ಕೋ ಕಾಯ್ದೆಯಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತ ನ್ಯಾಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದರು.

ಪುಟ್ಟ ಬಾಲಕಿಯ ಬಾಲ್ಯವನ್ನು ಕಸಿದುಕೊಳ್ಳುವಂತಹ ಕ್ರೌರ್ಯಕ್ಕೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಆರೋಪಿಗಳು ಯಾರೇ ಆಗಿರಲಿ, ಯಾವುದೇ ಪಕ್ಷ ಅಥವಾ ಸಮುದಾಯಕ್ಕೆ ಸೇರಿದವರಾಗಿರಲಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು.

ಈ ಪ್ರಕರಣದಲ್ಲಿ ಯಾವುದೇ ರೀತಿಯ ರಾಜಕೀಯ, ಸಾಮಾಜಿಕ ಅಥವಾ ಅಧಿಕಾರದ ಒತ್ತಡಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸಿ ಸಂತ್ರಸ್ತ ಬಾಲಕಿಗೆ ನ್ಯಾಯ ಒದಗಿಸಬೇಕು ಎಂದು ನಾನು ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತೇನೆ.

ಮಗುವಿಗೆ ನ್ಯಾಯ ಸಿಗುವವರೆಗೂ ಈ ಧ್ವನಿ ನಿಲ್ಲಬಾರದು ಎಂಬುದು ಅಪ್ಸರ್ ಕೊಡ್ಲಿಪೇಟೆಯ ಆಗ್ರಹವಾಗಿದೆ.Ad

Share URL copied

Leave a comment

Leave a Reply

Your email address will not be published. Required fields are marked *

Related Articles

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಸರ್ಕಾರಿ ಬಸ್ ಟಿಕೆಟ್ ದರ ಶೀಘ್ರದಲ್ಲೇ ಪರಿಷ್ಕರಣೆಗೆ ಸಾಧ್ಯತೆ

ಬೆಂಗಳೂರು, ಸೆಪ್ಟೆಂಬರ್ 04: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ಜನತೆಗೆ...

ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ – ಭಾರತದಲ್ಲಿ LPG ಬಳಕೆ 13% ಕುಸಿತ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದಿದ್ದು, ಭಾರತದಲ್ಲಿ ಎಲ್‌ಪಿಜಿ ಬಳಕೆ 13% ರಷ್ಟು ಕುಸಿತ ಕಂಡಿದೆ. ಯುದ್ಧದಿಂದಾಗಿ ಪೂರೈಕೆಯಲ್ಲಿ...

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ಮನೆ ಮೇಲೆ ಇ.ಡಿ ದಾಳಿ

ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ...

ರಾಜ್ಯಸಭೆ ಸಚಿವಾಲಯದ ಕಾರ್ಯದರ್ಶಿಯಾದ ಕನ್ನಡಿಗ: ಭಾಷಾಂತರಕಾರಾಗಿ ಉನ್ನತ ಹುದ್ದೆಗೇರಿದ ಸೋಮಶೇಖರ್ ಯಾರು?

ಬೆಂಗಳೂರು, (ಏಪ್ರಿಲ್ 20): ಕರ್ನಾಟಕದ ಡಾ. ಕೆ.ಎಸ್. ಸೋಮಶೇಖರ್ (Dr KS Somashekhar) ಅವರು ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ (Rajya...