Home ರಾಜ್ಯ ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ – ಭಾರತದಲ್ಲಿ LPG ಬಳಕೆ 13% ಕುಸಿತ
ರಾಜ್ಯ

ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ – ಭಾರತದಲ್ಲಿ LPG ಬಳಕೆ 13% ಕುಸಿತ

URL copied
Share URL copied

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದಿದ್ದು, ಭಾರತದಲ್ಲಿ ಎಲ್‌ಪಿಜಿ ಬಳಕೆ 13% ರಷ್ಟು ಕುಸಿತ ಕಂಡಿದೆ. ಯುದ್ಧದಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಎಲ್‌ಪಿಜಿ ಬಳಕೆ ತೀವ್ರ ಕುಸಿತಕ್ಕೆ ಕಾರಣವಾಗಿದೆ.

ಭಾರತದಲ್ಲಿ ಮಾರ್ಚ್‌ನಲ್ಲಿ ಎಲ್‌ಪಿಜಿ ಬಳಕೆ ಶೇ.13ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್‌ಪಿಜಿ 2.729 ದಶಲಕ್ಷ ಟನ್ ಬಳಕೆಯಾಗಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ 2.379 ದಶಲಕ್ಷ ಟನ್ ಬಳಕೆಯಾಗಿದೆ.

ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ (ಪಿಪಿಎಸಿ) ದತ್ತಾಂಶಗಳಿಂದ ಮಾಹಿತಿ ಹೊರಬಿದ್ದಿದೆ. ಭಾರತ ತನ್ನ ಒಟ್ಟು ಬೇಡಿಕೆಯ ಎಲ್‌ಪಿಜಿಯಲ್ಲಿ ಶೇ.60 ರಷ್ಟು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮೂಲಕವೇ ಬರಬೇಕಿದ್ದ ಎಲ್‌ಪಿಜಿ, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆ ಎಲ್‌ಪಿಜಿ ಪೂರೈಕೆಯಲ್ಲಿ ನಿರಂತರ ವ್ಯತ್ಯಯವಾಗುತ್ತಿದೆ.

ಎಲ್‌ಪಿಜಿ ಅಭಾವ ಪರಿಣಾಮವು ಗೃಹೇತರ ವಿಭಾಗಗಳ ಮೇಲೆ ಹೆಚ್ಚು ತೀವ್ರವಾಗಿದೆ. ವಾಣಿಜ್ಯ ಬಳಕೆದಾರರಿಗೆ LPG ಮಾರಾಟವು ಸುಮಾರು ಶೇ.48 ರಷ್ಟು ಕುಸಿದಿದ್ದರೆ, ಬೃಹತ್ LPG ಬಳಕೆ ಶೇ.75.5 ರಷ್ಟು ಕುಸಿದಿದೆ.

Share URL copied

Leave a comment

Leave a Reply

Your email address will not be published. Required fields are marked *

Related Articles

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ಮನೆ ಮೇಲೆ ಇ.ಡಿ ದಾಳಿ

ಬೆಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ...